Index   ವಚನ - 8    Search  
 
ಬೀಜದೊಳಗಿಹ ವೃಕ್ಷಫಲವ ಸವಿಯಬಹುದೆ? ಬಿಂದುವಿನಲ್ಲಿರ್ಪ ಸತಿಯಸಂಗಭೋಗವು ಸಂಘಟಿಸುವುದೆ? ಮಳೆವನಿಯೊಳಿರ್ಪ ಹುರುಮಂಜಿಮುತ್ತುಗಳಂ ಸರಗೊಳಿಸಿ ಕೊರಳೊಳು ಧರಿಸಬಹುದೆ? ಹಾಲೊಳಗಿರ್ಪ ತುಪ್ಪವು ಅರಸಿದರೆ ಸಿಕ್ಕುವುದೆ? ಕಬ್ಬಿನೊಳಗಿರ್ಪ ಬೆಲ್ಲವು ಕಣ್ಣಿಗೆ ಕಾಣಿಸುವುದೆ? ತನ್ನೊಳಗಿರ್ಪ ಶಿವತತ್ವವು ನೆನೆದಾಕ್ಷಣವೆ ಅನುಭವಕ್ಕೆ ಬರ್ಪುದೆ? ಭಾವಿಸಿ ತಿಳಿದು ಮಥಿಸಿ ಪ್ರಯೋಗಾಂತರದಿಂ ಪ್ರಸನ್ನಮಂ ಮಾಡಿಕೊಂಡು, ತದನುಭವಸುಖದೊಳೋಲಾಡುವುದು ಅತಿಚತುರನಾದ ಶಿವಶರಣಂಗಲ್ಲದುಳಿದರ್ಗುಂಟೆ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.