ಬೀಜದೊಳಗಿಹ ವೃಕ್ಷಫಲವ ಸವಿಯಬಹುದೆ?
ಬಿಂದುವಿನಲ್ಲಿರ್ಪ ಸತಿಯಸಂಗಭೋಗವು ಸಂಘಟಿಸುವುದೆ?
ಮಳೆವನಿಯೊಳಿರ್ಪ ಹುರುಮಂಜಿಮುತ್ತುಗಳಂ
ಸರಗೊಳಿಸಿ ಕೊರಳೊಳು ಧರಿಸಬಹುದೆ?
ಹಾಲೊಳಗಿರ್ಪ ತುಪ್ಪವು ಅರಸಿದರೆ ಸಿಕ್ಕುವುದೆ?
ಕಬ್ಬಿನೊಳಗಿರ್ಪ ಬೆಲ್ಲವು ಕಣ್ಣಿಗೆ ಕಾಣಿಸುವುದೆ?
ತನ್ನೊಳಗಿರ್ಪ ಶಿವತತ್ವವು
ನೆನೆದಾಕ್ಷಣವೆ ಅನುಭವಕ್ಕೆ ಬರ್ಪುದೆ?
ಭಾವಿಸಿ ತಿಳಿದು ಮಥಿಸಿ ಪ್ರಯೋಗಾಂತರದಿಂ
ಪ್ರಸನ್ನಮಂ ಮಾಡಿಕೊಂಡು,
ತದನುಭವಸುಖದೊಳೋಲಾಡುವುದು
ಅತಿಚತುರನಾದ ಶಿವಶರಣಂಗಲ್ಲದುಳಿದರ್ಗುಂಟೆ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Bījadoḷagiha vr̥kṣaphalava saviyabahude?
Binduvinallirpa satiyasaṅgabhōgavu saṅghaṭisuvude?
Maḷevaniyoḷirpa huruman̄jimuttugaḷaṁ
saragoḷisi koraḷoḷu dharisabahude?
Hāloḷagirpa tuppavu arasidare sikkuvude?
Kabbinoḷagirpa bellavu kaṇṇige kāṇisuvude?
Tannoḷagirpa śivatatvavu
nenedākṣaṇave anubhavakke barpude?
Bhāvisi tiḷidu mathisi prayōgāntaradiṁ
prasannamaṁ māḍikoṇḍu,
tadanubhavasukhadoḷōlāḍuvudu
aticaturanāda śivaśaraṇaṅgalladuḷidarguṇṭe
mahāghana doḍḍadēśikāryaguruprabhuve.