ಜ್ಞಾನವೇ ಮೂಲಮಾಗಿ,
ಆನಂದವೇ ಪರಿಪಕ್ವಫಲಮಾಗಿಯೂ ಇರ್ಪ
ಸತ್ಯವೆಂಬ ವೃಕ್ಷವು ಮನವೆಂಬ ನೆಲದೊಳಗೆ ಬೇರಂ ಬಿಟ್ಟು,
ಭಾವವೆಂಬ ಆಕಾಶವನ್ನವಗ್ರಹಿಸಿರಲು,
ಆ ವೃಕ್ಷಮೂಲದಲ್ಲಿರ್ಪ ಶಿವನಿಗೆ ನಿವೇದನಾರ್ಥಮಾಗಿ,
ಶರಣನು ವಿವೇಕಶಾಖೆಯನ್ನೇರಿ,
ತತ್ವವಲ್ಲಿಯ ಮರೆಯಲ್ಲಿ ತಾಂ ನಿಂದು,
ಕಾಣಿಸದೆ, ತದಾನಂದಫಲವಂ
ಶಿವಾರ್ಪಿತಕ್ಕೆ ಸ್ಪರ್ಶನ ಮಾಡಿದನಿತರೊಳು,
ಆದ್ಯಂತಂಗಳಳಿದು, ಅರ್ಪಣಾನ್ವಿತವಿಶಾಖಾಕಲಿತಮಾಗಿ
ಸ್ಥಾಣುವಾಗಿರ್ಪ ವಿಚಿತ್ರಮಂ ಕಂಡೆ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Jñānavē mūlamāgi,
ānandavē paripakvaphalamāgiyū irpa
satyavemba vr̥kṣavu manavemba neladoḷage bēraṁ biṭṭu,
bhāvavemba ākāśavannavagrahisiralu,
ā vr̥kṣamūladallirpa śivanige nivēdanārthamāgi,
śaraṇanu vivēkaśākheyannēri,
tatvavalliya mareyalli tāṁ nindu,
kāṇisade, tadānandaphalavaṁ
śivārpitakke sparśana māḍidanitaroḷu,
ādyantaṅgaḷaḷidu, arpaṇānvitaviśākhākalitamāgi
sthāṇuvāgirpa vicitramaṁ kaṇḍe kāṇā
mahāghana doḍḍadēśikāryaguruprabhuve.