Index   ವಚನ - 43    Search  
 
ಭಕ್ತಿಯೆಂಬ ಪಾಲನ್ನು ಮನದಲ್ಲಿ ಹೆಪ್ಪುಗೊಟ್ಟು, ಅದರಿಂ ಘಟ್ಟಿಗೊಂಡ ದೃಢಿಮ ದಧಿಯನ್ನು ಶರೀರಮೆಂಬ ಭಾಂಡದಲ್ಲಿ ತುಂಬಿ, ತತ್ವವೆಂಬ ಮಂತುಗೋಲಿನಿಂದ ಮಥಿಸಲು, ಲಿಂಗವೆಂಬ ನವನೀತವು ಕಾಣಿಸಲಾಗಿ ಅದಂ ಪರಿಗ್ರಹಿಸಿ, ಜ್ಞಾನಾಗ್ನಿಯಲ್ಲಿ ಪಕ್ವವಂ ಮಾಡಲು, ನಿಜವಾಸನೆಯಿಂ ಪ್ರಕಾಶಿಸುತ್ತಿಹ ತದ್ಘೃತಸೇವನಾಬಲದಿಂದ ಆತ್ಮನೇ ಲಿಂಗಮಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.