Index   ವಚನ - 42    Search  
 
ಜ್ಞಾನವೇ ಮೂಲಮಾಗಿ, ಆನಂದವೇ ಪರಿಪಕ್ವಫಲಮಾಗಿಯೂ ಇರ್ಪ ಸತ್ಯವೆಂಬ ವೃಕ್ಷವು ಮನವೆಂಬ ನೆಲದೊಳಗೆ ಬೇರಂ ಬಿಟ್ಟು, ಭಾವವೆಂಬ ಆಕಾಶವನ್ನವಗ್ರಹಿಸಿರಲು, ಆ ವೃಕ್ಷಮೂಲದಲ್ಲಿರ್ಪ ಶಿವನಿಗೆ ನಿವೇದನಾರ್ಥಮಾಗಿ, ಶರಣನು ವಿವೇಕಶಾಖೆಯನ್ನೇರಿ, ತತ್ವವಲ್ಲಿಯ ಮರೆಯಲ್ಲಿ ತಾಂ ನಿಂದು, ಕಾಣಿಸದೆ, ತದಾನಂದಫಲವಂ ಶಿವಾರ್ಪಿತಕ್ಕೆ ಸ್ಪರ್ಶನ ಮಾಡಿದನಿತರೊಳು, ಆದ್ಯಂತಂಗಳಳಿದು, ಅರ್ಪಣಾನ್ವಿತವಿಶಾಖಾಕಲಿತಮಾಗಿ ಸ್ಥಾಣುವಾಗಿರ್ಪ ವಿಚಿತ್ರಮಂ ಕಂಡೆ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.