Index   ವಚನ - 44    Search  
 
ಗೊಲ್ಲರಹಳ್ಳಿಯಲ್ಲಿ ಭೂವಲ್ಲಭನಿದ್ದರೆ, ಅಲ್ಲಿನ ಜನರು ಅವಂಗೆ ಕುರಿಯಹಾಲಂ ಕರೆದುಕೊಟ್ಟು, ನೀಚೋಚ್ಚವರಿಯದ ಮಾತುಗಳನಾಡಿ ನಗಿಸುವರಲ್ಲದೆ, ರಾಜೋಪಚಾರವಂ ಮಾಡಬಲ್ಲರೇನಯ್ಯಾ? ಅಂತು ಜ್ಞಾನಿಯೆಂದರಿತು ನನ್ನ ಹೃದಯದಲ್ಲಿ ನೀಂ ನೆಲಸಿದಲ್ಲಿ, ನನ್ನಲ್ಲಿಹ ತಮೋಗುಣಗಳಿಂ ಪೂಜಿಸಿ, ಅಪಶಬ್ದಗಳಿಂ ಸ್ತುತಿಸುವೆನಲ್ಲದೆ, ನಿಜಭಾವದಿಂದರ್ಚಿಸಿ, ನೈಘಂಟುಕಶಬ್ದಂಗಳಿಂ ಸ್ತುತಿಸಬಲ್ಲೆನೇನಯ್ಯಾ? ಇಂತು ನಾನು ಮಾಡುತ್ತಿರ್ಪ ಅಪಚಾರಂಗಳಂ ನೀನುಪಚಾರಂಗಳಾಗಿ ಕೈಕೊಳ್ಳದಿರ್ದೊಡೆ, ನಿನ್ನ ಪರಮದಯಾಮಹಿಮೆ ಪ್ರಕಟಮಪ್ಪುದೇನಯ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ?