Index   ವಚನ - 2    Search  
 
ಅಂಗದಲ್ಲಿದ್ದು ಕೈಗೆ ಬಂದೆ. ಕೈಯಿಂದ ಮನಕ್ಕೇಕೆ ಬಾರೆಯಯ್ಯಾ ? ನಾ ಹಾಡಿ ನೀ ಕೇಳಿ, ಬಾಯಿ ಕಿವಿ ನೋವಿಲ್ಲವೆ ಅಯ್ಯಾ ? ನೀ ಸಾವ ದಿನವಿಲ್ಲ, ನಾನುಳಿವ ದಿನವಿಲ್ಲ. ನಿನ್ನಂಗವಡಗದು, ಎನ್ನ ಮನವುಡುಗದು. ಕ್ರೀಯೆಂಬ ಹಾವಸೆಯಲ್ಲಿ ಸಿಕ್ಕಿ, ಮೇಲನರಿಯದೆ ತೊಳಲುತ್ತೈದೇನೆ. ಐಘಟಕ್ಕೆ ಠಾವ ಹೇಳಾ, ಐಘಟದೂರ ರಾಮೇಶ್ವರಲಿಂಗವೆ.