Index   ವಚನ - 18    Search  
 
ಇಚ್ಫಾಶಕ್ತಿಸ್ವರೂಪ ವರ್ತುಳವಾಗಿ, ಕ್ರಿಯಾಶಕ್ತಿಸ್ವರೂಪ ಗೋಮುಖವಾಗಿ, ಜ್ಞಾನಶಕ್ತಿಸ್ವರೂಪ ಸಲಾಕೆರೂಪಾಗಿ, ತ್ರಿವಿಧಭೇದವ ಒಡಗೂಡಿ ತ್ರಿವಿಧಶಕ್ತಿ ಲಿಂಗವಾಯಿತ್ತು. ಇಚ್ಫಾಶಕ್ತಿಗೆ ಕ್ರೀ, ಕ್ರಿಯಾಶಕ್ತಿ ಜ್ಞಾನ, ಜ್ಞಾನಶಕ್ತಿಗೆ ಸರ್ವಭಾವಕೂಟ. ಭಾವ ಇಷ್ಟದಲ್ಲಿ ನಿಂದು, ತ್ರಿವಿಧವ ತೊಟ್ಟು ಬಿಟ್ಟು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ಇದೇ ಗೊತ್ತು.