ಊರ್ಧ್ವಮುಖದಲ್ಲಿಯೈದಿದ ವಿಹಂಗ,
ಅಧೋಮುಖದಲ್ಲಿ ಧರೆಯ ನೋಡಿ,
ತಾನಡರುವ ತೆರನ ಕಾಬಂತೆ,
ತುರೀಯದಲ್ಲಿಯೈದಿ, ತೂರ್ಯಾತೀತದಲ್ಲಿ ನೋಡಿ,
ತತ್ವದಲ್ಲಿ, ನಿಶ್ಚಯವ ಮಾಡಬೇಕು, ಇಷ್ಟಲಿಂಗವ.
ಆ ಇಷ್ಟ ನಿಶ್ಚಯದ ನಿಜತತ್ವದಲ್ಲಿ ಆಶ್ರಯಿಸಿ,
ಬಚ್ಚಬಯಲಾಗಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Ūrdhvamukhadalliyaidida vihaṅga,
adhōmukhadalli dhareya nōḍi,
tānaḍaruva terana kābante,
turīyadalliyaidi, tūryātītadalli nōḍi,
tatvadalli, niścayava māḍabēku, iṣṭaliṅgava.
Ā iṣṭa niścayada nijatatvadalli āśrayisi,
baccabayalāgabēku,
aighaṭadūra rāmēśvaraliṅgavanarivudakke.