ಎಂಬತ್ತುನಾಲ್ಕುಲಕ್ಷ ಜೀವವ್ರತ. ಐವತ್ತಾರು ನೇಮವ್ರತ.
ಅರುವತ್ತನಾಲ್ಕು ಶೀಲವ್ರತ. ಮೂವತ್ತಾರು ಆಚಾರವ್ರತ.
ತ್ರಿವಿಧ ಕ್ರೀಭಾವ ನೇಮವ್ರತ.
ಇಂತಿವರಲ್ಲಿ ಶುದ್ಧಾತ್ಮನಾಗಿ ಅರಿದುದೇ ಜೀವನ್ಮುಕ್ತವ್ರತ.
ಐಘಟದೂರ ರಾಮೇಶ್ವರಲಿಂಗದಲ್ಲಿ
ಸರ್ವ ಅವಧಾನಿಯ ಕ್ರೀ ಶುದ್ಧತೆ.
Art
Manuscript
Music
Courtesy:
Transliteration
Embattunālkulakṣa jīvavrata. Aivattāru nēmavrata.
Aruvattanālku śīlavrata. Mūvattāru ācāravrata.
Trividha krībhāva nēmavrata.
Intivaralli śud'dhātmanāgi aridudē jīvanmuktavrata.
Aighaṭadūra rāmēśvaraliṅgadalli
sarva avadhāniya krī śud'dhate.