Index   ವಚನ - 38    Search  
 
ಕಾಯಶೂನ್ಯ, ಜೀವಶೂನ್ಯ, ಪ್ರಾಣಶೂನ್ಯವೆಂದೆಂಬರು, ಅದೆಂತಯ್ಯ ? ಮನ ಮನನ ಮನನೀಯಂಗಳಲ್ಲಿ ಮಂತ್ರಲೀಯವಾದುದೆ ಕಾಯಶೂನ್ಯ. ಆ ಮಂತ್ರ ಪಿಂಡಾಂಡದಲ್ಲಿ, ಪರಿಪೂರ್ಣಭೇದ ತೋರಿದಾಗಲೆ ಜೀವಶೂನ್ಯ. ಆ ಪ್ರಭೆಯ ಪರಿಣಾಮದಲ್ಲಿ ಜೀವನ ಉಪಾಧಿ ನಷ್ಟವಾಗಿ, ಜೀವ ಪರಮ ಸಂಯೋಗವೆಂಬ ಸಂದೇಹವಳಿದಾಗಲೇ ಪ್ರಾಣಶೂನ್ಯ, ಇದು ತ್ರಿವಿಧಶೂನ್ಯ, ಐಘಟದೂರ ರಾಮೇಶ್ವರಲಿಂಗದಲ್ಲಿ ನಿಲುಕಡೆ.