ಗರ್ಭದಲ್ಲಿ ಶಿಶು ಬಲಿದು,
ಹಸಿದೆನೆಂದು ಅತ್ತುದುಂಟೆ ಅಯ್ಯಾ ?
ಬೆಸನಾಗಿ ಪ್ರತಿರೂಪಿಂಗೆ ಕುಚಕ್ಷೀರವಲ್ಲದೆ
ಘಟದಿಂದಡಗಿದಲ್ಲಿ, ಸುಖ ತಾಯ ಇರವಿನಲ್ಲಿ ನಿಂದಂತೆ,
ಉಭಯದಭೇದ, ಇಷ್ಟಲಿಂಗಸಂಬಂಧಯೋಗ.
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ಇದಿರಿಟ್ಟ ಭೇದ.
Art
Manuscript
Music
Courtesy:
Transliteration
Garbhadalli śiśu balidu,
hasidenendu attuduṇṭe ayyā?
Besanāgi pratirūpiṅge kucakṣīravallade
ghaṭadindaḍagidalli, sukha tāya iravinalli nindante,
ubhayadabhēda, iṣṭaliṅgasambandhayōga.
Aighaṭadūra rāmēśvaraliṅgavanarivudakke idiriṭṭa bhēda.