ತನ್ನವರನ್ಯರಹರು,
ಹೆಣ್ಣು ಹೊನ್ನು ಮಣ್ಣು ಹಿಡಿದು ಹೋರಲಾಗಿ.
ಆ ಮೂರ ಬಿಟ್ಟಡೆ ಅನ್ಯರು ತನ್ನವರಹರು.
ಅರಿದವಂಗೂ ಸರಿ, ಜಗದ ಒಡಲಾದವಂಗೂ ಸರಿ ಆಸೆವೊಂದೇ ಭೇದ.
ಉಭಯಕ್ಕೆ ಹೊರಗಾಗು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
Art
Manuscript
Music Courtesy:
Video
TransliterationTannavaran'yaraharu,
heṇṇu honnu maṇṇu hiḍidu hōralāgi.
Ā mūra biṭṭaḍe an'yaru tannavaraharu.
Aridavaṅgū sari, jagada oḍalādavaṅgū sari āsevondē bhēda.
Ubhayakke horagāgu,
aighaṭadūra rāmēśvaraliṅgavanarivudakke.