Index   ವಚನ - 72    Search  
 
ಫಲ, ರಸವ ಇರಿಸಿಕೊಂಡಿದ್ದಂತೆ, ನೆಲ, ನಿಧಾನವನಿರಿಸಿಕೊಂಡಿದ್ದಂತೆ, ತಾಯಿ, ಗರ್ಭದ ಶಿಶುವ ಆರೈಕೆಯಲ್ಲಿ ತಾಳಿಕೊಂಡಿಪ್ಪಂತೆ, ಇದ್ದೆಯಲ್ಲಾ ನೀ ಕುರುಹಾಗಿ. ಅರಿವ ಆತ್ಮನ ಮರೆಯಮಾಡಿಕೊಂಡಿದ್ದೆಯಲ್ಲಾ, ಅರಿವನರಿವುದಕ್ಕೆ. ಕುರುಹಿನ ಮೂರ್ತಿಯಲ್ಲಿ ಅಂಗವ ಮರೆದು, ವಸ್ತುವ ಹಿಂಗದಿರು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.