Index   ವಚನ - 91    Search  
 
ರಾಜರ ಬಾಗಿಲಲ್ಲಿ ನಿಂದು, ಕೂಗಿ ಮೊರೆಯಿಟ್ಟು, ನೀನಾರೊ ಎಂದು ಕೇಳಿದಡೆ, ನಾನೊಡೆಯ ಎಂದಡೆ, ಅಡಗದೇಕೆ ನಿನ್ನ ಬಾಯಿ ? ತಡೆಯಿಸಿಕೊಂಡು ಒಡೆಯತನವುಂಟೆ ನಿನಗಲ್ಲಿ ? ಇಂತೀ ಬಿಡುಹೋರಿಗಳ ಬುಡ ಅಡಗದೇಕೆ, ಐಘಟದೂರ ರಾಮೇಶ್ವರಲಿಂಗವನರಿಯದೆ ?