Index   ವಚನ - 14    Search  
 
ಪ್ರಾಣಸ್ಥಾನದಲ್ಲಿ ಆಪ್ಯಾಯನವಾಯಿತ್ತು, ಲಿಂಗಜಂಗಮ. ತನುಸ್ಥಾನದಲ್ಲಿ ಆಪ್ಯಾಯನವಾಯಿತ್ತು, ಆಚಾರಲಿಂಗಸ್ಥಲ, ಗುರುಲಿಂಗಸ್ಥಲ. ಈ ಉಭಯಸ್ಥಲ ನಿಃಸ್ಥಲವಾಗಿ, ತಾನೊಂದೇ ತೋರುತ್ತಿರ್ದಿತ್ತು. ಈ ತೋರುವ ತೋರಿಕೆಯೆ ಬಸವಣ್ಣನೆನಗೆ. ಆ ಬಸವಣ್ಣನ ಕರುಣದಿಂದ ಪ್ರಭುದೇವರ ಶ್ರೀಪಾದವ ಕಂಡು, ನಾನು ಬದುಕಿದೆನು ಕಾಣಾ, ಗವರೇಶ್ವರಾ.