ಕರ್ಮದೊಳಗಣ ಸತ್ಕರ್ಮ, ಮರ್ಮದೊಳಗಣ ನಿಜವರ್ಮ,
ಅರಿವಿನೊಳಗಣ ಅರಿವ, ತೆರಹದೊಳಗಣ ತೆರವ ಕುರುಹಿಟ್ಟು,
ಕುರುಹ ಕುರುಹು ಅವಗವಿಸಿ,
ಅಭಿನ್ನವಿಲ್ಲದೆ ನಿರ್ವಾಹ ನಿರ್ಲೇಪವಾದುದು.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನು
ತಾನೆ ಕುರುಹು ಅರಿವಾದನು.
Art
Manuscript
Music
Courtesy:
Transliteration
Karmadoḷagaṇa satkarma, marmadoḷagaṇa nijavarma,
arivinoḷagaṇa ariva, terahadoḷagaṇa terava kuruhiṭṭu,
kuruha kuruhu avagavisi,
abhinnavillade nirvāha nirlēpavādudu.
Ennayyapriya im'maḍi niḥkaḷaṅka mallikārjunanu
tāne kuruhu arivādanu.