Index   ವಚನ - 18    Search  
 
ಕಪಟಕ್ಕೆ ಒಳಗು ಹೊರಗಲ್ಲದೆ, ಸ್ವಯಂಭು ಹೇಮಕ್ಕುಂಟೆ ಒಳಗು ಹೊರಗು? ಕುಟಿಲದಿಂದ ಘಟವ ಹೊರೆವಂಗೆ ಪ್ರಕಟಪೂಜೆಯಲ್ಲದೆ, ಅಘಟಿತಂಗುಂಟೆ ಅಖಿಳರ ಮೆಚ್ಚಿನ ಪೂಜೆ? ತೃಣದ ತುದಿಯ ಬಿಂದುವಾದಡೂ, ಉದುರಿ ಒಣಗಿದ ಕುಸುಮವಾದಡೂ ತ್ರಿಕರಣಶುದ್ಧವಾಗಿ ತ್ರಿಗುಣಾತ್ಮನ ಏಕವ ಮಾಡಿ ತ್ರಿಶಕ್ತಿಯ ಇಚ್ಫೆಯ ಮುಚ್ಚಿ ನಿಶ್ಚಯದಿಂದ ಮಾಡಿ ಮಾಡದಿದ್ದಡೂ ಮುಟ್ಟಿದಲ್ಲಿ ತೊಟ್ಟು ಬಿಟ್ಟ ಹಣ್ಣಿನಂತಿರಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಲಿಂಗವು, ಉಭಯ ಲೇಪವಾದ ಕಾರಣ.