ಗುರುವನರಿದು ಲಿಂಗವನರಿವವರುಂಟು,
ಲಿಂಗವನರಿದು ಜಂಗಮವನರಿವವರುಂಟು,
ಪಂಚಾಚಾರವನರಿದು ಜಂಗಮವನರಿವವರುಂಟು,
ಆ ಜಂಗಮವನರಿದಲ್ಲಿ ಷಟ್‍ಸ್ಥಲಸಂಬಂಧವಾಯಿತ್ತು.
ಆ ಸಂಬಂಧ ಸಮಯ ನಿಂದು,
ಉಭಯವಳಿದು ಏಕವಾದಲ್ಲಿ,
ಹಲವು ನೆಲೆ ತನ್ನ ವಿಶ್ವಾಸದ ಹೊಲಬಿನಲ್ಲಿ ಅಡಗಿತ್ತು.
ಆ ಹೊಲದ ಹೊಲಬಿನಲ್ಲಿ ನಿಂದವಂಗೆ
ಇಹಪರವೆಂಬ ಕಲೆ ಇಲ್ಲ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ
ಒಂದೆ ಎಂದಲ್ಲಿ.