ಗುರು ಅನಾಚಾರಿ, ಲಿಂಗವು ನೇಮಸ್ಥ,
ಜಂಗಮ ದುರಾಚಾರಿ ಇಂತೀ ತ್ರಿವಿಧ ಭೇದ.
ಸ್ಥೂಲ ಸೂಕ್ಷ್ಮ ಕಾರಣ ಇಂತೀ ತನುತ್ರಯ ಕೂಡಿ,
ತನುವಿಂಗೆ ಕುರುಹು, ಮನಕ್ಕೆ ಅರಿವು,
ಅರಿವಿಂಗೆ ನಿಜದನೆಲೆ ಅಹನ್ನಕ್ಕ ಸೂತಕಸುಳುಹು ಕೆಡದು,
ಸರ್ವವ ನೇತಿಗಳೆವ ಮಾತು ಬಿಡದು.
ಇಂತೀ ತ್ರಿವಿಧದ ಭೇದವ ಭೇದಿಸಿ ನಿಂದಲ್ಲಿ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನು
ವಿರಳವಿಲ್ಲದ ಅವಿರಳಸಂಬಂಧಿ.
Art
Manuscript
Music
Courtesy:
Transliteration
Guru anācāri, liṅgavu nēmastha,
jaṅgama durācāri intī trividha bhēda.
Sthūla sūkṣma kāraṇa intī tanutraya kūḍi,
tanuviṅge kuruhu, manakke arivu,
ariviṅge nijadanele ahannakka sūtakasuḷuhu keḍadu,
sarvava nētigaḷeva mātu biḍadu.
Intī trividhada bhēdava bhēdisi nindalli
ennayyapriya im'maḍi niḥkaḷaṅka mallikārjunanu
viraḷavillada aviraḷasambandhi.