Index   ವಚನ - 44    Search  
 
ನುಡಿದ ನುಡಿಯೆಲ್ಲವು ಮಹಾಪ್ರಸಂಗವಾದ ಮತ್ತೆ ಲೆಕ್ಕವಿಲ್ಲದ ವೇದ, ಸಂಖ್ಯೆಯಿಲ್ಲದ ಶಾಸ್ತ್ರ, ಕಡೆ ನಡು ಮೊದಲಿಲ್ಲದ ಪುರಾಣವನೋದಲೇತಕ್ಕೆ? ಅಲಗು ಮರೆ ಉಳ್ಳವಂಗೆ ಶಸ್ತ್ರದ ಭಯವೇತಕ್ಕೆ? ಬಾಣದ ತೊಗಲುಳ್ಳವಂಗೆ ಅಂಬಿನ ಘಾಯವೇತಕ್ಕೆ? ಶಬ್ದಮುಗ್ಧವಾದವಂಗೆ ಇಚ್ಫೆಯ ನುಡಿದು ಕುಚಿತ್ತನಾಗಲೇಕೆ? ಅದು ತನ್ನ ಸ್ವಯದಿಂದ ಅಲ್ಲ ಅಹುದೆಂಬುದಕ್ಕೆ ದೃಷ್ಟವಾಯಿತ್ತು. ಬೆಳಗಿನ ಮುಖದಿಂದ ಬೆಳಗಿನ ಕಳೆಯನರಿವಂತೆ ನಿನ್ನಿಂದ ನೀನೇ ತಿಳಿ,ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನ ಭಿನ್ನಭಾವವಿಲ್ಲದೆ.