Index   ವಚನ - 45    Search  
 
ಪೂಜಿಸಿ ಕಂಡೆಹೆನೆಂದಡೆ, ಆ ಪೂಜೆಗೆ ತನ್ಮಯಮೂರ್ತಿ ನೀನು. ನೆನಹಿನಲ್ಲಿ ಅನುಕರಿಸಿ ಕಂಡೆಹೆನೆಂದಡೆ ಆ ನೆನಹಿಂಗೆ ಆತ್ಮಸ್ವರೂಪ ನೀನು. ಎಲ್ಲಾ ಎಡೆಯಲ್ಲಿ ಭಿನ್ನವ ಮಾಡಿ ಕಂಡೆಹೆನೆಂದಡೆ, 'ಅಣೋರಣೀಯಾನ್ ಮಹತೋ ಮಹೀಯಾನ್' ನೀನು. ಸತ್ಯವೆಲ್ಲಿದ್ದಿತ್ತು ಅಲ್ಲಿ ತಪ್ಪದೆ ಇಪ್ಪೆ ನೀನು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ ವಿಶ್ವಾಸವೆಲ್ಲಿಪ್ಪುದೊ ಅಲ್ಲಿ ತಪ್ಪದೆ ಇಪ್ಪೆ ನೀನು.