ಬಯಲೆಂದಡೆ ಕೀಳು ಮೇಲಿನೊಳಗಾಯಿತ್ತು.
ನಿರವಯವೆಂದಡೆ ಸಾವಯದಿಂದ ಕುರುಹುದೋರಿತ್ತು.
ಸವಿದ ಸವಿಯನುಪಮಿಸಬಾರದೆಂದಡೆ
ಜಿಹ್ವೆಯಿಂದ ಕುರುಹುಗೊಂಡಿತ್ತು.
ಆ ಜಿಹ್ವೆ ಸಾಕಾರ, ಸವಿದ ಸವಿ ನಿರಾಕಾರವೆಂದಡೆ,
ನಾನಾ ಭೇದಂಗಳಿಂದ ರುಚಿಮಯವಾಯಿತ್ತು.
ಆ ಜಿಹ್ವೆಯ ಕೊನೆಯ ಮೊನೆಯಲ್ಲಿ ನಿಂದು,
ಅಹುದಲ್ಲವೆಂಬುದ ತಾನೆ ಕುರುಹಿಟ್ಟುಕೊಂಡಂತೆ
ಜಿಹ್ವೆ ಬಲ್ಲುದೆಂದಡೆ ತನ್ನಡಿಗೆ ಬಾರದುದನರಿಯಿತ್ತೆ?
ಸಾರ ಸ್ವಾದ ಲೇಸೆಂದಡೆ ಜಿಹ್ವೆ ಹೊರತೆಯಾಗಿ
ಕುರುಹುಗೊಂಡಿತ್ತೆ? ಇದು ಕ್ರೀ ಜ್ಞಾನ ಸಂಪುಟಸ್ಥಲ.
ಈ ಉಭಯಸ್ಥಲ ಲೇಪವಾದ ಮತ್ತೆ
ನಿರುತ ನಿರ್ಯಾಣವೆಂಬುದು ನನ್ನಲ್ಲಿಯೊ? ನಿನ್ನಲ್ಲಿಯೊ?
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ
ಸದಾತ್ಮದಲ್ಲಿ ನಿನ್ನ ಕುರುಹೇಕೆ ಅಡಗದು?
Art
Manuscript
Music
Courtesy:
Transliteration
Bayalendaḍe kīḷu mēlinoḷagāyittu.
Niravayavendaḍe sāvayadinda kuruhudōrittu.
Savida saviyanupamisabāradendaḍe
jihveyinda kuruhugoṇḍittu.
Ā jihve sākāra, savida savi nirākāravendaḍe,
nānā bhēdaṅgaḷinda rucimayavāyittu.
Ā jihveya koneya moneyalli nindu,
ahudallavembuda tāne kuruhiṭṭukoṇḍante
jihve balludendaḍe tannaḍige bāradudanariyitte?
Sāra svāda lēsendaḍe jihve horateyāgi
Kuruhugoṇḍitte? Idu krī jñāna sampuṭasthala.
Ī ubhayasthala lēpavāda matte
niruta niryāṇavembudu nannalliyo? Ninnalliyo?
Ennayyapriya im'maḍi niḥkaḷaṅka mallikārjunā
sadātmadalli ninna kuruhēke aḍagadu?