ಬಯಲ ಹೊಲಬಿನಲ್ಲಿ ಹುಟ್ಟಿದ ಬೆಳಗು
ಶಿಲೆ ಲೋಹ ಕಂಚುಗಳಲ್ಲಿ
ಬೆಳಗಿನ ಕಳೆ ತೋರುವಂತೆ,
ಎನ್ನ ಕರತಳದಲ್ಲಿ ಸ್ವಯಂಭುವಪ್ಪ ಲಿಂಗವೆ,
ನಿನ್ನ ಕಳೆ ಎನ್ನ ಕಂಗಳಿಗೆ ಹೊಲಬಾಗಿ ಏಕೆ ತೋರದು?
ಅದು ಎನ್ನದು ಜಡವೊ ನಿನ್ನಯ ಪ್ರಕೃತಿಯೊ?
ಅದು ನಿನ್ನ ಬಿನ್ನಾಣದ ಗನ್ನದ ಭೇದವೊ?
ಎನ್ನಲ್ಲಿ ನೀನಿಲ್ಲದ ಕಾರಣವೊ?
ನಾ ನಿನ್ನಲ್ಲಿ ಸುಗುಣವಿಲ್ಲದ ಕಾರಣವೊ ಎನಗೆ ಭಿನ್ನನಾದೆ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ,
ಎನ್ನಲ್ಲಿ ನೀ ಸನ್ನದ್ಧನಾಗಿರು.
Art
Manuscript
Music
Courtesy:
Transliteration
Bayala holabinalli huṭṭida beḷagu
śile lōha kan̄cugaḷalli
beḷagina kaḷe tōruvante,
enna karataḷadalli svayambhuvappa liṅgave,
ninna kaḷe enna kaṅgaḷige holabāgi ēke tōradu?
Adu ennadu jaḍavo ninnaya prakr̥tiyo?
Adu ninna binnāṇada gannada bhēdavo?
Ennalli nīnillada kāraṇavo?
Nā ninnalli suguṇavillada kāraṇavo enage bhinnanāde
ennayyapriya im'maḍi niḥkaḷaṅka mallikārjunā,
ennalli nī sannad'dhanāgiru.