Index   ವಚನ - 62    Search  
 
ಸಂಸಾರಸಂಗದಿಂದಲುದಯಿಸಿದ ಸಾರ ಸುಖವೆ ದುಃಖವೆಂದರಿಯದೆ, ಆ ಸುಖವನೆ ಮೆಚ್ಚಿ ಭವದುಃಖವೆಂಬ ಕ್ರೂರ ಜನ್ಮಚಕ್ರಕ್ಕೀಡಾಗಿ, ಅಲ್ಲಿ ತನ್ನ ಮರೆದು, ತನಗಿಲ್ಲದುದ ಭ್ರಮೆಯಿಂದ ತನ್ನದೆಂದು, ಅಂತಪ್ಪ ಭವಘೋರ ನರಕದೊಳಾಳುತ್ತ ಮುಳುಗಾಡುತಿಪ್ಪ ಅಜ್ಞಾನಿಜೀವಿಗಳು ನಿಮ್ಮನೆತ್ತಬಲ್ಲರಯ್ಯಾ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.