ಹೃತ್ಕಮಲಮಧ್ಯದಲ್ಲಿಪ್ಪ ಲಿಂಗವ ಸರ್ವಾಂಗದಲ್ಲಿ ವೇಧಿಸಿ,
ಪರಿಪೂರ್ಣವಪ್ಪ ಲಿಂಗವ
ಅಂತರ್ಮುಖದಿಂದ ಬಹಿರ್ಮುಖಕ್ಕೆ ತಂದು,
ಪಂಚಸ್ಥಾನದಲ್ಲಿಪ್ಪ ಲಿಂಗವ ಕರಸ್ಥಲದಲ್ಲಿ
ಮೂರ್ತಿಗೊಳಿಸಲಿಕ್ಕಾಗಿ,
ಕಂಗಳು ತುಂಬಿ, ಬಾಹ್ಯದೃಷ್ಟಿಯರತು,
ಲಿಂಗದೃಷ್ಟಿ ಪರಿಪೂರ್ಣವಾಗಿ,
ದೃಕ್ಕಿಂಗೆ ತೋರುವುದೆಲ್ಲವೂ ಲಿಂಗಮಯವಾಗಿ,
ಏನ ಮುಟ್ಟಿ ಹಿಡಿದಡೆಯೂ ಪುಷ್ಪಮಯವಾಗಿ,
ಜಿಹ್ವೆಯಲ್ಲಿ ತೋರುವ ಅಪ್ಪುರಸ
ಮುಂತಾದುವೆಲ್ಲವು ಅರ್ಪಿತಮಯವಾಗಿ,
ಇಂತಪ್ಪ ವ್ಯವಧಾನ ಸರ್ವಾಂಗಲಿಂಗಿಯ ಅವಧಾನ.
ಇಷ್ಟದ ಅರಿವೆಂದು ಉಭಯದ ಗುಟ್ಟು ಕೆಟ್ಟಲ್ಲಿ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನೆಂಬುದಕ್ಕೆ
ಇದಿರೆಡೆಯಿಲ್ಲ.
Art
Manuscript
Music
Courtesy:
Transliteration
Hr̥tkamalamadhyadallippa liṅgava sarvāṅgadalli vēdhisi,
paripūrṇavappa liṅgava
antarmukhadinda bahirmukhakke tandu,
pan̄casthānadallippa liṅgava karasthaladalli
mūrtigoḷisalikkāgi,
kaṅgaḷu tumbi, bāhyadr̥ṣṭiyaratu,
liṅgadr̥ṣṭi paripūrṇavāgi,
Dr̥kkiṅge tōruvudellavū liṅgamayavāgi,
ēna muṭṭi hiḍidaḍeyū puṣpamayavāgi,
jihveyalli tōruva appurasa
muntāduvellavu arpitamayavāgi,
intappa vyavadhāna sarvāṅgaliṅgiya avadhāna.
Iṣṭada arivendu ubhayada guṭṭu keṭṭalli
ennayyapriya im'maḍi niḥkaḷaṅka mallikārjunanembudakke
idireḍeyilla.