Index   ವಚನ - 69    Search  
 
ಹೇಮದ ಬೆಂಬಳಿಯ ಸ್ವರೂಪದಂತೆ, ಗ್ರಾಮದ ಬೆಂಬಳಿಯ ಬಟ್ಟೆಯಂತೆ. ಹೇಮದ ರೂಪವಳಿದು ಸ್ವರೂಪವಡಗಿದಲ್ಲಿ ಕುಶಲಚಿತ್ರವೆಲ್ಲಿದ್ದಿತ್ತು? ಬಟ್ಟೆಯ ಮೆಟ್ಟಿ ಹೋಗಿ ಪುನರಪಿಯಾಗಿ ತಿರುಗಿದಲ್ಲಿ, ಊರ ಬಾಗಿಲ ಬಟ್ಟೆಯ ಒಂದರಲ್ಲಿ ಹೋಗಬೇಕು. ಇದು ದೃಷ್ಟಕ್ಕೆ ಕೊಟ್ಟ ಇಷ್ಟ; ಆ ಇಷ್ಟ ಚಿತ್ತದಲ್ಲಿ ಅಚ್ಚೊತ್ತಿದ ಮತ್ತೆ, ಆ ನಿಶ್ಚಯ ಉಭಯವ ತಿಳಿದಲ್ಲಿ, ಕಾಯಕ್ಕೆ ಕೈಲಾಸವೆಂಬುದಿಲ್ಲ, ಭಾವಕ್ಕೆ ಬಯಲೆಂಬುದಿಲ್ಲ. ಅನಲನಲ್ಲಿ ಅರತ ದ್ರವ್ಯದಂತೆ ಅದು ಅಮೂರ್ತಿಭಾವ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ.