Index   ವಚನ - 5    Search  
 
ಅಂಗಭವಿ, ಭಕ್ತಂಗೆ ಮನಭವಿ ಮಹೇಶ್ವರಂಗೆ. ರುಚಿಭವಿ ಪ್ರಸಾದಿಗೆ, ಕುರುಹುಭವಿ ಪ್ರಾಣಲಿಂಗಿಗೆ. ತ್ರಿವಿಧನಾಮಭವಿ ಶರಣಂಗೆ, ಕೂಟಸ್ಥಭವಿ ಐಕ್ಕಂಗೆ. ಇಂತೀ ಸ್ಥಲಂಗಳಲ್ಲಿ, ಕುರುಹ ಕುರುಹಿನಲ್ಲಿ ಕಂಡು, ಅರಿವ ಅರಿವಿನಲ್ಲಿ ತಿಳಿದು, ಐಕ್ಯ ಐಕ್ಯನಾದ ಮತ್ತೆ, ಅದು ಕಲ್ಲಿನೊಳಗಣ ಬೆಳಗು, ಮುತ್ತಿನೊಳಗಣ ಅಪ್ಪು, ಕರ್ಪುರದೊಳಗಣ ಉರಿಯಂತೆ, ದೃಷ್ಟವಿದ್ದು ನಿಃಪತಿಯಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ.