Index   ವಚನ - 7    Search  
 
ಅಂಗಲಿಂಗವೆಂದು, ಪ್ರಾಣಲಿಂಗವೆಂದು, ಉಭಯದ ಒಡಲನೊಡಗೂಡುವ ಪರಿಯಿನ್ನೆಂತೊ? ಅದು ಶಿಲೆಯ ಬೆಳಗಿನಂತೆ, ಶಿಲೆ ಅಡಗಿದಡೆ ಬೆಳಗಿಲ್ಲ. ಬೆಳಗಡಗಲಿಕ್ಕೆ ಆ ಶಿಲೆ ಅಚೇತನ ಪಾಷಾಣವಾಯಿತ್ತು. ಅಪ್ಪು ಕೂಡಿದ ಪರ್ಣಯೆಲೆ ನಾಮರೂಪಾದಂತೆ, ಅಪ್ಪುವಡಗೆ ಅಚೇತನ ತರಗಾಯಿತ್ತು. ಅಂಗದ ಮೇಲಣ ಲಿಂಗ, ಲಿಂಗದ ಮೂರ್ತಿಯ ನೆನಹು, ಈ ತ್ರಿವಿಧ ಒಂದುಗೂಡಿದಲ್ಲಿ, ಅಂಗವೆಂಬ ಭಾವ, ಲಿಂಗವೆಂಬ ನೆನಹು ನಿರಂಗವಾದಲ್ಲಿ, ಕಾಯಕ್ಕೆ ಕುರುಹಿಲ್ಲ, ಜೀವಕ್ಕೆ ಭಯವಿಲ್ಲ. ಈ ಗುಣ ಪ್ರಾಣಲಿಂಗಿಯ ಭೇದ, ನಿಃಕಳಂಕ ಮಲ್ಲಿಕಾರ್ಜುನಾ.