Index   ವಚನ - 28    Search  
 
ಅನಲನೆಂಬ ಗಂಡಂಗೆ ತೃಣವೆಂಬ ಹೆಂಡತಿ ಮೋಹದಿಂದಪ್ಪಲಾಗಿ, ಬೇಯ್ದಆಕೆಯ ಕರಚರಣಾದಿಗಳು, ಆ ಗಂಡನಲ್ಲಿಯೆ ಒಪ್ಪವಿಟ್ಟಂತಿರಬೇಕು. ಇಂತಪ್ಪ ಇಷ್ಟಲಿಂಗವ ದೃಷ್ಟದಲ್ಲಿ ಹಿಡಿದುದಕ್ಕೆ ಇದೇ ದೃಷ್ಟ. ಹೀಂಗಲ್ಲದೆ ಲೌಕಿಕಾರ್ಚನೆಯ ಮಾಡುವ ಪೂಜಕರ ಮೆಚ್ಚೆನೆಂದ, ನಚ್ಚಿನಗ್ಫಣಿಯ ಮಜ್ಜನದೊಡೆಯ ನಿಃಕಳಂಕ ಮಲ್ಲಿಕಾರ್ಜುನಾ.