Index   ವಚನ - 31    Search  
 
ಅನುಪಮ ಲಿಂಗವೆ, ಎನ್ನ ನೆನಹಿಂಗೆ ಬಾರೆಯಾ, ಅಯ್ಯಾ ? ಎನ್ನ ತನುಮನ ಶುದ್ಧವಿಲ್ಲೆಂದು, ಎನ್ನ ನೆನಹಿನಲ್ಲಿ ನೀ ನಿಲ್ಲೆಯಾ, ಅಯ್ಯಾ ? ಎನ್ನಪಾತಕದ ಪುಂಜವ ನೀ ಅತಿಗಳೆಯಾ. ಎನ್ನ ಹಸುವಿಂಗೆ ಅಸು ನೀನೆ, ವಿಷಯಕ್ಕೆ ಮನ ನೀನೆ, ಭೋಗಿಸುವುದಕ್ಕೆ ಅಂಗ ನೀನೆ. ಸ್ಫಟಿಕದ ಘಟದೊಳಗಣ ಬಹುರಂಗಿನಂತೆ, ಎನ್ನ ಅಂಗಮಯ ನೀನಾಗಿ ಹಿಂಗಲೇಕೆ ನಿಃಕಳಂಕ ಮಲ್ಲಿಕಾರ್ಜುನಾ ?