Index   ವಚನ - 39    Search  
 
ಅಪ್ಪು ಷಡುವರ್ಣವ ಕೂಡಿ ಚಿಹ್ನವಿಚ್ಫಿನ್ನವಿಲ್ಲದೆ ವರ್ಣಭೇದವ ಕೊಟ್ಟು, ಬಿನ್ನಾಣದಿ ತಾನ[ರಿ]ತಂತೆ ತ್ರಿವಿಧಮೂರ್ತಿಯಾಗಿ, ಷಟ್ಸ್ಥಲಬ್ರಹ್ಮಿಯಾಗಿ ನಾನಾತತ್ವಂಗಳಲ್ಲಿ ಕಲ್ಪಿತನಾಗಿ, ಸತ್ಕ್ರೀಯಲ್ಲಿ ಭಾವಿತನಾಗಿ, ನಿಃಕ್ರೀಯಲ್ಲಿ ನಿರಂಗನಾಗಿ, ಕರ್ಪುರದ ಬುಡದಲ್ಲಿ ಕಿಚ್ಚು ಹುಟ್ಟಿದಂತೆ, ಅದು ಹುಟ್ಟುವಲ್ಲಿ ಆ ಬುಡಕ್ಕೆ ನಿಶ್ಚಯವಾಯಿತ್ತು. ಅರಿದರುಹಿಸಿಕೊಂಬ ಉಭಯವಲ್ಲದಿಲ್ಲ. ಭಕ್ತಿಗೆ ಕ್ರೀ, ವಿರಕ್ತಿಗೆ ನಿರವಯ. ಇಂತೀ ದ್ವಂದ್ವವುಳ್ಳನ್ನಕ್ಕ ನೀನು, ನೀನೆಂಬನ್ನಕ್ಕ ನಾನು ಎನ್ನ ಭಾವದಲ್ಲಿ ಮನೋಮೂರ್ತಿಯಾದಲ್ಲಿ, ನಿಃಕಳಂಕನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.