Index   ವಚನ - 78    Search  
 
ಆಡುವಂಗೆ ಅವಧಾನ ಆಭಾಸಾಂಗವಲ್ಲದೆ ನೋಡುವಂಗೆ ಚೋದ್ಯವಪ್ಪಂತೆ, ಈ ಉಭಯವನೊಡಗೂಡಿದ ಭೇದದ ನೋಡಾ. ಕೈಯಲ್ಲಿ ಅಡಗುವಾಗ ಕಲ್ಲಲ್ಲ. ಮನದಲ್ಲಿ ಒಡಗೂಡಿ ಸುಳಿವಾಗ ಗಾಳಿಯಲ್ಲ. ಏನೂ ಎನ್ನದೆ ಇಹಾಗ ಬಯಲಲ್ಲ. ಎಲ್ಲಿ ತನ್ನನರಿದಲ್ಲಿಯೆ ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.