Index   ವಚನ - 128    Search  
 
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾದೆನೆಂಬ ಡಿಂಡೆಯ ಮತದ ಹಿರಿಯರುಗಳೆಲ್ಲಾ ನೀವು ಕೇಳಿರೊ. ಬಲೆಯೊಳಗಾದ ಹುಲಿಗೆ ಬಲಾತ್ಕಾರವುಂಟೆ ? ಲಲನೆಯರ ಸಂಸರ್ಗದಲ್ಲಿದ್ದು ಚಲನೆಯಿಲ್ಲದೆ ಬಿಂದುವುಂಟೆ ? ಶಿಲೆಯೊಳಗಣ ಬೆಂಕಿಗೆ ಅಲಂಕಾರ ಉಂಟೆ ? ಸಲಿಲದೊಳಗಣ ತೃಷ್ಣೆಗೆ ಅಪ್ಯಾಯನ ಉಂಟೆ ? ಅರಿವನರಿದಂಗಕ್ಕೆ, ಮರವೆಗೆ ತೆರನುಂಟೆ ? ತೆರನನರಿದು, ಹರಿದಲ್ಲಿಯೆ ಅರಿಕೆ ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.