Index   ವಚನ - 157    Search  
 
ಊರೆಲ್ಲರು ಬೇಟೆಗೆ ಹೋಗಿ ಕೊಂದರು ಕಾಡೆಮ್ಮೆಯ. ಅದು ಸಂದಿಗೆ ಸಾವಿರ ರೂಪು, ಕೊಂಬಿಗೆ ಹಿಂಗದ ವೆಜ್ಜ, ಅದರಂಗದ ಕಂಗಳು ಕಪ್ಪು. ಅದ ಕೊಂದವರ ತಂದು ಕೂಡಿದೆ ನನ್ನಂಗಳದಲ್ಲಿ. ಆ ಅಂಗಳ, ಅವರ ತಿಂದು ನುಂಗಿತ್ತು. ಮೂರು ಭುವನವ ನುಂಗಿದವರ ಕಂಡು, ಹಿಂಗಲಾರೆ, ನಿಃಕಳಂಕ ಮಲ್ಲಿಕಾರ್ಜುನಾ.