Index   ವಚನ - 169    Search  
 
ಎಷ್ಟು ಪಟುಭಟನಾದಡೂ ಸ್ಫುಟದ ಮನೆಯಲ್ಲಿ ಅಡಗಬೇಕು. ದಿಟಪುಟವನರಿದಡೂ ಗುರು ಕೊಟ್ಟ ನಿಟಿಲಲೋಚನನ ಘಟಿಸಬೇಕು. ಭಿತ್ತಿಯ ಮೇಲೆ ಚಿತ್ತಾರ ಒಪ್ಪವಿಟ್ಟಂತಿರಬೇಕು. ಗುರು ಕೊಟ್ಟ ಇಷ್ಟದ ಬೆಂಬಳಿಯ ದೃಷ್ಟವನರಿಯಬೇಕು. ಮೆಟ್ಟಿದುದು ಜಾರಿ, ಹಿಡಿದುದ ಮುರಿದ ಮತ್ತೆ, ಎರಡುಗೆಟ್ಟವಂಗೆ ಇನ್ನೇತಕ್ಕೆ, ನಿಃಕಳಂಕ ಮಲ್ಲಿಕಾರ್ಜುನಾ ?