Index   ವಚನ - 176    Search  
 
ಒಂದ ಕಂಡು ಒಂದನರಿದೆಹೆನೆಂಬನ್ನಕ್ಕ, ಸಂದೇಹಪದದಲ್ಲಿ ಅರಿವುದಿನ್ನೇನೋ ? ಒಂದನರಿತು, ಒಂದ ಮರೆತು, ಬೇರೊಂದ ಕಂಡಹೆನೆನುವ ಒಡಲದೇನೋ ? ಆ ದ್ವಂದ್ವವಳಿದು, ನಿಂದ ನಿಜವೆ ಸಂದೇಹಕ್ಕೆ ಒಡಲಿಲ್ಲ ನಿಂದುದು, ಷಡುಸ್ಥಲಭರಿತ ಪರಿಪೂರ್ಣ ನಿಃಕಳಂಕ ಮಲ್ಲಿಕಾರ್ಜುನಾ.