Index   ವಚನ - 183    Search  
 
ಒಡಗೂಡಿಪ್ಪ ಲಿಂಗವನರಿಯದೆ ಅಡಿಯಿಟ್ಟು, ಪೊಡವಿಯೊಳಗಣ ಅಡವಿ ಗಿಡುಗಳಲ್ಲಿಪ್ಪ ಮೃಡಾಲಯಮಂ ಕಂಡು, ಪೊಕ್ಕು ಸಡಗರಿಸಿಕೊಂಡು ವರವ ಹಡೆವೆನೆಂದು ಬೇಡುವುದು ಕುರಿತು, ಅದು ಜರಿದು ಬೀಳೆ, ಕೊಟ್ಟ [ನೆ]ರವನೆಂದು ನಿಶ್ಚಯ ಮಾಡಿದ ಮತ್ತೆ, ಸಾವರ ಕಂಡು ಅಚ್ಚುಗಬಡುತ್ತಿದ್ದೇನೆ. ಇವರಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ ?