Index   ವಚನ - 190    Search  
 
ಓ ಎಂದಲ್ಲಿ ನಿರಾಕಾರವಸ್ತುವಾದೆಯಲ್ಲಾ, ಓಂ ಎಂದಲ್ಲಿ ಸಾಕಾರವಸ್ತುವಾದೆಯಲ್ಲಾ. ತತ್ತ್ವಮಸಿಯೆಂದಲ್ಲಿ ತತ್ವರೂಪಾಗಿ, ಜಗವ ರಕ್ಷಿಸಿಹೆನೆಂದು ಕರ್ತೃರೂಪಾದೆಯಲ್ಲಾ. ನಿಮಗೆ ಮರ್ತ್ಯದ ಮಣಿಹ ಎಲ್ಲಿಯ ಪರಿಯಂತರ, ಎನಗೆ ಕಟ್ಟುಗುತ್ತಗೆಯೆ? ನಾ ಕಟ್ಟಿಗೆಯ ಹೊತ್ತೆ, ಶಿವಭಕ್ತರ ಮನೆಗೆ. ನೀವು ಕೊಟ್ಟ ಕಾಯಕದ ಕೃತ್ಯ, ಇನ್ನೆಷ್ಟುದಿನ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.