Index   ವಚನ - 194    Search  
 
ಕಂಡು ನೋಡಿದಲ್ಲಿ ಕಂಗಳಿಗೆ ಸುಖ, ಉಂಡು ನೋಡಿದಲ್ಲಿ ಜಿಹ್ವೆಗೆ ಸುಖ, ಮುಟ್ಟಿ ನೋಡಿದಲ್ಲಿ ತ್ವಕ್ಕಿಗೆ ಸುಖ. ಮುಖಮುಖಂಗಳಲ್ಲಿ ಭಿನ್ನವಿಲ್ಲದೆ, ಅರ್ಪಿತಾವಧಾನ ಏಕಮುಖವೆಂದೆ. ಜಾತಿಗೆ ಬೇರೆ ಹರುಗೋಲುಂಟೆ ? ಆಚಾರಕ್ಕೆ ಬೇರೆ ಕುಲಛಲವುಂಟೆ ? ಶಿಲೆ ಹಲವು ರೂಪಾದ ತೆರನಂತೆ, ಅವರ ಒಲವರದ ರೂಪು ಅವರ ಛಲದ ಗುಣ. ಬಳಿಕೆವಂತರೆಲ್ಲ ನಳಕೆಯ ಕೀರನಂತೆ, ಅವರರಿದಾಗ ಅರಿವಲ್ಲ, ನಾ ನುಡಿದ ತಪ್ಪನೊಪ್ಪುಗೊಳ್ಳಾ, ನಿಃಕಳಂಕ ಮಲ್ಲಿಕಾರ್ಜುನಾ.