Index   ವಚನ - 229    Search  
 
ಕಳವಿನಲ್ಲಿ ಬಂದಿರಿದಾತ ಕಳ್ಳನಲ್ಲದೆ ಧೀರನಲ್ಲ. ಅಲಗಿನ ಮೊನೆ ಹಳಚಿನಲ್ಲಿ ಗತಿ ತಪ್ಪಿ ಬಿದ್ದಡೆ, ಕೈದು ಸಹಿತ ಕೋಯೆಂದು ಇದಿರಾಗು ಎನಬೇಕಲ್ಲದೆ, ಬಸವಳಿದು ಬಿದ್ದವನ ಅಸುವ ಕೊಂಬ ಸುಗಡಿಗಳನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ ?