Index   ವಚನ - 239    Search  
 
ಕಾಯದ ಕರದಲ್ಲಿ ಲಿಂಗವ ಹಿಡಿದು, ಬಾಯಾರಿ, ಭವಗೆಟ್ಟು, ನಾಣುಗೆಟ್ಟು ನಾನಾರೆಂಬುದನರಿಯದೆ, ಇದಿರಿಚ್ಫೆಯನೇನೆಂದರಿಯದೆ, ಕಾಯದ ಸುಖಕ್ಕಾಗಿ ಜೀವರ ಬೇಡುವ ಜಾರರಿಗೆಲ್ಲಿಯದೊ ಲಿಂಗ, ನಿಃಕಳಂಕ ಮಲ್ಲಿಕಾರ್ಜುನಾ ?