Index   ವಚನ - 244    Search  
 
ಕಾಯಪ್ರಕೃತಿ, ಜೀವಪ್ರಕೃತಿ, ಭಾವಪ್ರಕೃತಿ. ಸಂಚಾರಭ್ರಮೆ ಮುಂಚದೆ, ಸಂಚಿತ ದುಃಕರ್ಮಂಗಳ ಪಂಕ್ತಿಯಲ್ಲಿ ಕುಳ್ಳಿರದೆ, ಇದರಂಚೆಯ ತಿಳಿ, ಮುಂಚು ಬೇಗ, ನಿಃಕಳಂಕ ಮಲ್ಲಿಕಾರ್ಜುನನ ನಿಸ್ಸಂಗದ ಕೂಟ.