Index   ವಚನ - 251    Search  
 
ಕಾಳಗಕ್ಕೆ ಆಳಾಗಿ ಬಂದೆ. ಎನಗಿದಿರಾಗಿ ಕೈದುವ ಹಿಡಿವವರನಾರನೂ ಕಾಣೆ. ಅಗೆದು ನೋಡಿದೆ, ಮೊಗೆದು ನೋಡಿದೆ, ಎನಗೆ ಇದಿರಹವರಿಗೆ. ಎನ್ನ ದೇಹ ವಜ್ರಾಂಗಿಯೆ ? ಎನ್ನ ಕರ ಕಂಪಿಸುವ ಕೈದೆ ? ಎನ್ನ ಹೃದಯ ಬೆಳಗಿನೆದೆಗಿಚ್ಚೆ ? ನಿರ್ಭೀತಿ ನೀತಿಯೆ ? ಎನ್ನನೊಡಗೂಡಾ, ನಿಃಕಳಂಕ ಮಲ್ಲಿಕಾರ್ಜುನಾ.