ಕುಲಿಶ ಅಂಗುಲದೊಳಗಡಗಿದಡೆ, ಕುಟ್ಟದೆ ಬೆಟ್ಟವ ಹಿಟ್ಟುಗುಟ್ಟಿ ?
ಶಿಲೆಯೊಳಗಡಗಿದ್ದ ಪಾವಕ ಉದಯಿಸಿ ಸುಡದೆ ಮಹಾರಣ್ಯವ ?
ಚಿತ್ತುವಿನಲ್ಲಿ ಉದಯಿಸಿದ ಜ್ಞಾನ, ತನುವಿನ ಮೊತ್ತದೊಳಗಿಪ್ಪ
ಕಟ್ಟೇಂದ್ರಿಯವ ನಷ್ಟವ ಮಾಡದೆ ?
ಸರ್ಪದಷ್ಟವಾದಡೇನು ವಿಷ ಚಲನೆಯಾಗಿಯಲ್ಲದೆ
ತನುವಿನ ಮರವೆಯಿಲ್ಲ.
ಹೀಂಗೆ ಘಟಿಸಿಯಲ್ಲದೆ ಅಘಟಿತವಾಗಬಾರದು.
ಇಂತಪ್ಪ ಪ್ರಕಾಶಿತಂಗೆ ನಮೋ ನಮೋ ಎಂಬೆ
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Kuliśa aṅguladoḷagaḍagidaḍe, kuṭṭade beṭṭava hiṭṭuguṭṭi?
Śileyoḷagaḍagidda pāvaka udayisi suḍade mahāraṇyava?
Cittuvinalli udayisida jñāna, tanuvina mottadoḷagippa
kaṭṭēndriyava naṣṭava māḍade?
Sarpadaṣṭavādaḍēnu viṣa calaneyāgiyallade
tanuvina maraveyilla.
Hīṅge ghaṭisiyallade aghaṭitavāgabāradu.
Intappa prakāśitaṅge namō namō embe
niḥkaḷaṅka mallikārjunā.