Index   ವಚನ - 282    Search  
 
ಕೊಂದು ಕುಟ್ಟಿ ದಂಡವ ಕೊಂಬವಂಗೆ, ಅದು ಬಂದಿಕಾರತನವೊ, ಕೃಪೆಯೊ ? ಇದರಂದವ ತಿಳಿಯಬೇಕು. ಬಂದು ಉಂಡುಹೋಹ ಜಂಗಮಕ್ಕೆ, ಇದರ ಸಂದನರಿಯದಿರ್ದಡೆ, ಬಂಧದಲ್ಲಿ ಬಿದ್ದ ವಿಹಂಗನಂತೆ, ಇದರ ದಂದುಗವ ನೋಡಲಾರೆ, ನಿಃಕಳಂಕ ಮಲ್ಲಿಕಾರ್ಜುನಾ.