Index   ವಚನ - 336    Search  
 
ಚಂದ್ರಮಂಡಲದಲ್ಲಿ ನಿಂದಿರ್ಪ ಭೇದವ, ಅದರಂಗದ ನಿಲುವೆಂತುಟೊ ? ಅಂಗಮಂಡಲದಲ್ಲಿ ಲಿಂಗವಿಪ್ಪ ಭೇದವ, ಸಂಗೊಳಿಸುವ ಪರಿಯಿನ್ನೆಂತುಟೊ ? ಈ ಭಂಗಿತವ ಮಾಡುವ ಇಂದ್ರಿಯ ಕರಣಂಗಳಲ್ಲಿ ನಿಂದಿಹ ಪರಿಯಿನ್ನೆಂತುಟೊ ? ಈ ಭೇದ, ರಸಫಲದಂಗ, ಬಸವಣ್ಣ ಮೊದಲಾದ ಪ್ರಮಥರು ಬಲ್ಲರು. ಇದನಾನೇವೆ, ನಿಃಕಳಂಕ ಮಲ್ಲಿಕಾರ್ಜುನಾ ?