ಚಿನ್ನದಲ್ಲಿ ಮಾಡಿದ ರೂಪು, ಮಣ್ಣಿನಲ್ಲಿ ಮಾಡಿದ ರೂಪು,
ಕಲ್ಲಿನಲ್ಲಿ ಮಾಡಿ ರೂಪು ಪ್ರಳಯವಾಗಲು,
ಸ್ಥೂಲವಳಿದಡೆ ಸೂಕ್ಷ್ಮಕ್ಕೆ ತರಬಹುದು.
ಬಣ್ಣದ ರೂಪು ಚೆನ್ನುತನ ಹರಿದಲ್ಲಿ, ಅದ ನನ್ನಿಯ ಮಾಡಬಹುದೆ ?
ಅದು ತನ್ನಲ್ಲಿಯೆ ಲೇಪ, ಅದು ಭಿನ್ನಕ್ಕೆ ಬಾರದು.
ಇವ ಚೆನ್ನಾಗಿ ಹೇಳಾ, ಅಭಿನ್ನಮೂರ್ತಿ
ನಿಃಕಳಂಕ ಮಲ್ಲಿಕಾರ್ಜುನಾ.