Index   ವಚನ - 345    Search  
 
ಜಂಗಮ ಸುಳಿದಡೆ ವಸಂತ ಗಾಳಿಯಂತೆ ಸುಳಿವ. ಬಿರುಗಾಳಿಯಂತೆ ಸುಳಿವನೆ ? ಸುಳಿಯ. ಜಂಗಮಸ್ಥಲವೆಂತೆಂದಡೆ, ಮಳಲೊಳಗಣ ಅಗ್ಘಣಿಯಂತೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಕದಡ ಚೆಲ್ಲಿ, ತಿಳಿಯ ಕೊಳಬಲ್ಲಡೆ ಜಂಗಮವೆಂಬೆ. ಇಂತಲ್ಲದಿರ್ದಡೆ ಭೂತಪ್ರಾಣಿಯೆಂಬೆ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.