Index   ವಚನ - 356    Search  
 
ಜಾಲಗಾರನ ಡೋಣಿಯಂತೆ, ಬಳಸುವ ಹುಟ್ಟಿನಂತೆ, ಬೈಚಿಟ್ಟಿ ನೆಲೆಯಂತಿರ್ದಡೇನು ಭೋಗಿಸಲರಿಯನಾಗಿ, ಲಿಂಗವಂಗದ ಮೇಲಿದ್ದಡೆ ಮನ ಸಂಗವ ಮಾಡಬಲ್ಲುದೆ ? ಇವರಂಗವ ನೋಡಾ. ಕೆಳಗೆ ನಿಂದು ಚಪ್ಪಿರಿದಡೆ ತೊಟ್ಟು ಬಿಟ್ಟಿತ್ತೇ ಹಣ್ಣು? ಅದರ ಒಲುಮೆ ಈ ಪರಿ, ನಿಃಕಳಂಕ ಮಲ್ಲಿಕಾರ್ಜುನಾ.